
Savitri
Simple soul, radiant heart
V Sem, ECE
'ವಿದ್ಯಾಧನಂ ಸರ್ವಧನಂ ಪ್ರಧಾನಂ' ಎಂಬ ತತ್ವವನ್ನು ಪರಿಪಾಲಿಸುವ, ಮೂಲ ಯಾದಗಿರಿ ಜಿಲ್ಲೆಯ, ನಮ್ಮ ಉತ್ತರ ಕರ್ನಾಟಕದ ಹುಡುಗಿ. ಮನಸಾ ವಾಚಾ ಕರ್ಮಣಾ: ನೇರ, ದಿಟ್ಟ ಎಂಬAತಿರುವ ಸಾವಿತ್ರಿ, ದ್ವಿತೀಯ ವರ್ಷ ವಿದ್ಯುನ್ಮಾನ ಮತ್ತು ಸಂವಹನ ಅಭಿಯಂತ್ರಣದ ವಿದ್ಯಾರ್ಥಿನಿ. ಗ್ರಾಮದಿಂದ ಪ್ರಾರಂಭವಾದ ತನ್ನ ಶೈಕ್ಷಣಿಕ ಪ್ರವಾಸದುದ್ದಕ್ಕೂ ಸದಾ ಆತ್ಮವಿಶ್ವಾಸ ಮತ್ತು ವಿಶೇಷವಾಗಿ ಏನನ್ನಾದರೂ ಸಾಧಿಸಿ, ತನ್ನ ಪೋಷಕರ ಕನಸನ್ನು ನನಸಾಗಿಸಬೇಕೆಂಬ ಛಲದಿಂದ ಮುಂದುವರೆದವಳು. ಶಾಂತ, ಸರಳ ಸ್ವಭಾವದ ಸ್ವಾಭಿಮಾನಿ ಸಂಪಾದಕಿ ಸಾವಿತ್ರಿ. ಸಂಪಾದಕ ಮಂಡಳಿಗೆ ಹೊಸದಾಗಿ ಸೇರ್ಪಡೆಗೊಂಡಿರುವ ಈ ಪ್ರತಿಭೆ ಅಂತರ್ಮುಖಿಯಾದರೂ, ತನ್ನದೇಯಾದ ವಿಶಿಷ್ಠ ವಿಚಾರಧಾರೆ ಹಾಗೂ ನುಡಿಯಿಂದ ಎಲ್ಲರ ಗಮನ ಸೆಳೆಯುವಳು. ಓದಿನ ಮೇಲಷ್ಟೇ ಅಲ್ಲದೆ, ಕೃತಿ-ಕಾವ್ಯಗಳನ್ನು ಓದುವ ಹವ್ಯಾಸ, ಅಧ್ಯಾತ್ಮದ ಬಗ್ಗೆ ನಿಶಿತ ಒಲವು ಹೊಂದಿದ್ದು ಅನನ್ಯ. ವಿದ್ಯಾರ್ಥಿ ಮತ್ತು ವೃತ್ತಿ ಜೀವನದ ತನ್ನೆಲ್ಲಾ ಪ್ರಯತ್ನದಲ್ಲಿಯೂ ಅಪಾರ ಯಶಸ್ಸು ಅವಳದಾಗಲಿ ಎಂಬ ಆಶಯ
Character Stats
Geekiness
Introversion
Peching
Paapaness
Speciality
Has an unshakeable will