Charvi

Charvi

The energy booster

III Sem, ECE

ಚಾರ್ವಿ, ನೀರು ಕುಡಿದಂತೆ ಸುಲಲಿತವಾಗಿ ಸಂವಾದಿಸುತ್ತ ಎಲ್ಲರೊಡನೆ ಸಕ್ಕರೆಯಂತೆ ಬೆರೆಯುವ ಈ ಪೋರಿ ಮೊದಲ ವರ್ಷದ ECE ವಿಭಾಗದ ವಿದ್ಯಾರ್ಥಿನಿಯಾಗಿದ್ದಾಳೆ. ನೀವು ಆಗತಾನೆ, ಮೊದಲ ಬಾರಿಗೆ ಇವಳನ್ನು ಕಂಡು "ಹಾಯ್" ಎಂದು ಹೇಳುವ ಮಾತ್ರವೇ ತಡ, ಮರುಕ್ಷಣದಲ್ಲಿ ಇದು ತುಂಬಾ ಹಳೆಯ ಪರಿಚಯವೆಂದು ಭಾಸವಾಗುತ್ತದೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರಸಿದ್ಧ ಗಾಯಕರಾದ ಶ್ರೀಯುತ ರಾಮಕೃಷ್ಣಮೂರ್ತಿ ಅವರ ಗಾಯನವೆಂದರೆ ಇವಳಿಗೆ ಅಚ್ಚುಮೆಚ್ಚು. 'ಯುಕೆಲೆಲೆ' ಹಾಗು 'ಗಿಟಾರ್'ನಂತಹ ತಂತಿ ವಾದ್ಯಗಳನ್ನು ಸುಂದರವಾಗಿ ನುಡಿಸುತ್ತಾ ಆಗಾಗ ಇನ್ಸ್ಟಾಗ್ರಾಮ್ ನಲ್ಲಿ ಪ್ರತ್ಯಕ್ಷವಾಗುತ್ತಿರುತ್ತಾಳೆ. ಬಹುಮುಖ ಪ್ರತಿಭೆಯ ಈ ಹುಡುಗಿಗೆ ಪುಸ್ತಕಗಳನ್ನು ಓದುವುದು ಎಂದರೆ ಬಹಳ ಪ್ರೀತಿ. ಯಾವುದಾದರೂ ಒಂದು ಪುಸ್ತಕವನ್ನು ಓದಬೇಕು ಎಂಬ ತುಡಿತವು ಬಂದೊಡನೆ, ಗೌಪ್ಯವಾಗಿ ಆ ಪುಸ್ತಕವು ಯಾರಲ್ಲಿದೆ ಎಂಬ ಸಂಶೋಧನೆಯನ್ನು ನಡೆಸಿದ ನಂತರವೇ ಅವರಲ್ಲಿ ಆ ಪುಸ್ತಕದ ಬಗ್ಗೆ ಒಂದು ಸಂಭಾಷಣೆಯನ್ನು ಹೊಂದಿಸಿಬಿಡುತ್ತಾಳೆ ಎಂಬುದು ಅನೇಕರಿಗೆ ತಿಳಿಯದ ಸಂಗತಿ. ಸಂಪಾದಕ ಮಂಡಳಿಯ ಪ್ರತಿಯೊಂದು ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದು, ಪ್ರತಿಯೊಂದು ವಿಧಾನದಲ್ಲಿಯೂ ಪರಿಶ್ರಮ ಪಡುವ ಈ ಸದಸ್ಯ ಆಗಮನದಿಂದ ನಮ್ಮ ಈ ಸಂಪಾದಕ ಮಂಡಳಿಗೆ ಒಂದು ಉತ್ತಮ ಸೇರ್ಪಡೆಯಾಗಿದೆ. ಇವಳ ಮುಂದಿನ ಜೀವನವು ಅತ್ಯಂತ ಹರ್ಷೋಲ್ಲಾಸದಿಂದ ಕೂಡಿರಲಿ ಎಂದು ಹಾರೈಸುತ್ತೇನೆ.


Character Stats
Geekiness
Introversion
Peching
Paapaness
Speciality
Impromptu

The Rest of the Crew

  • Shreyas S
  • Pruthvi K P
  • Sharmilee Sosale
  • Sudhanva Kulkarni
  • Tarun T
  • Gurudarshan M J
  • Ninaad A Kaller
  • Shivani M
  • Unnathi Prabhu
  • Anurag G
  • Vaishnavi Bharadwaj
  • Poornima Hegde
  • Ananya P
  • Bhoomika S G
  • Anjana Hegde
  • Anushree Bhat
  • Savitri
  • Diya Sharvani
  • Yashaswi V
  • Sai Supritha K P
  • Pranava Kulur
  • Shrijani G
  • Pranav Karthik
  • Charvi