
Shreyas S
Influenzaa
VII Sem, Mech
"ಮಚ್ಚಾ ಒಂಚೂರು ಕಿರಿಕ್ ಆಗಿದೆ! ಸ್ವಲ್ಪ ಹೆಲ್ಪ್ ಬೇಕಿತ್ತು ಲೋ" ಅಂತ ಗೆಳೆಯನ ಕರೆ ಬಂದ್ರೆ ಸಾಕು, ತನ್ನ ಬಾಯ್ಸ್ ಸೇರಿಸ್ಕೊಂಡು ಇಶ್ಯೂ ಸಾಲ್ವ್ ಮಾಡೋಕೆ ದೌಡಾಯಿಸೊ ಸ್ನೇಹಜೀವಿ ನಮ್ಮ ಶ್ರೇಯಸ್. ಏನೇ ಕಷ್ಟ ಬಂದ್ರು ಸಹಾಯಕ್ಕೆ ನಮ್ಮ ಬಾಯ್ಸ್ ಬರ್ತಾರೆ ಎಂಬ ಭರವಸೆ ಇವನದ್ದು. ಎರಡನೇ ವರ್ಷದ ಯಾಂತ್ರಿಕ ಎಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಯಾಗಿರುವ ಈತ ಯಾವ ಬ್ರಾಂಚ್ ಅಂತ ಕೇಳಿದರೆ "ರಾಯಲ್ ಮೆಕ್ ಅಮ್ಮ ನಮ್ದು" ಅಂತ ಎದೆ ಉಬ್ಬಿಸಿಕೊಂಡು ಉತ್ತರಿಸುತ್ತಾನೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ನ ವಿದ್ಯಾರ್ಥಿ ಆಗಿರೋದ್ರಿಂದ ಸ್ನೇಹಿತರ ಅಭಾವವೇನೂ ಇಲ್ಲ; ಆದರೆ ಸಂಗಾತಿಯ ಅಭಾವವಿದೆಯಂತೆ. ಈ ಕೊರತೆ ನೀಗಿಸೋಕೆ ನಾನು ಮತ್ತು ಸಂಚಿತ ಸೇರಿ ಡೇಟಿಂಗ್ ಅಪ್ಲಿಕೇಶನ್ ಒಂದರಲ್ಲಿ ಖಾತೆಯೊಂದನ್ನ ತೆರೆದಿದ್ವಿ. ಆದರೆ ಅಲ್ಲೂ ಸಹ ಯಾವ ಹುಡುಗಿನೂ ಸರಿ ಹೊಂದಿಲ್ವAತೆ. ಹಾಗಾಗಿ ಆಸಕ್ತರು ಇವನನ್ನು ಇನ್ಸ್ಟಾಗ್ರಾಮ್ ಮೂಲಕ ಸಂಪರ್ಕಿಸಬಹುದು. ಇವನು ಇನ್ಸ್ಟಾಗ್ರಾಮ್ ನಲ್ಲಿ ಹೆವಿ ಆಕ್ಟಿವ್. ಈಗೊಮ್ಮೆ ಆಗೊಮ್ಮೆ ವಿಭಿನ್ನ ಭಂಗಿ-ಶೈಲಿಯಲ್ಲಿ ಪೋಸ್ಟ್ ಮಾಡ್ತಾ ಇರ್ತಾನೆ. ಶ್ರೇಯಸ್ ನ ಫೋಟೋ ತೆಗೆಯೋ ಸಲುವಾಗಿ ವಿಷೇಶ ತರಬೇತಿ ಪಡೆದ ಹೈದರು ಇದ್ದಾರಂತೆ. 'ಶ' ಇಂದ ಶ್ರೇಯಸ್ ಅನ್ನೋದಕ್ಕಿಂತ 'ಶೋಕಿ' ಅನ್ನೋದು ವಾಸಿ. ಶ್ರೇಯಸ್ ದಿನದಲ್ಲಿ ಯಾವ ಕೆಲಸ ಮಾಡ್ತಾನೋ ಬಿಡ್ತಾನೋ ಗೊತ್ತಿಲ್ಲ, ಆದರೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಸ್ಕ್ರೋಲ್ ಮಾಡುವುದನ್ನು ಮಾತ್ರ ಬಿಡಲ್ಲ. 'ಕ್ರಿಂಜ್' ರೀಲ್ಸ್ ನ ಲೈಕ್ ಮಾಡದೆ ಮುಂದೆ ಹೋಗಲ್ಲ. ರೀಲ್ಸ್ ನೋಡಿ ತಾನಷ್ಟೇ ನಗುವ ಸ್ವಾರ್ಥಿಯಲ್ಲ ನಮ್ಮ ಶ್ರೇಯಸ್. ದಿನಕ್ಕೆ ನೂರಾರು ರೂಲ್ಸ್ ನ ಶೇರ್ ಮಾಡಿ ಎಲ್ಲರನ್ನೂ ನಗಿಸುವ ನಿಸ್ವಾರ್ಥಿ.
ಇವನ ಜೊತೆ ಮಾತಾಡೋಕೆ ಒಂತರ ಖುಷಿ. ಯಾವುದೇ ಕಾನ್ವರ್ಸೇಶನ್ ಇರಲಿ, ಅದನ್ನು ವಿಭಿನ್ನ ಆಯಾಮದಿಂದ ನೋಡಿ ಬೇರೆ ಅರ್ಥ ಕಲ್ಪಿಸಿ ನಗೋಕೆ ಪ್ರಾರಂಭಿಸುತ್ತಾನೆ. 'ಯುನಿಸೆಕ್ಸ್ ಶರ್ಟ್' ಅನ್ನು 'ಬೈಸೆಕ್ಷುವಲ್ ಶರ್ಟ್' ಅಂತ ಕರೆದಿದ್ದೂ ಉಂಟು. ಇವನ ಮನೆಯಲ್ಲಿ ೧೦ನೇ ತರಗತಿಯ ತನಕ ಸ್ಟ್ರಿಕ್ಟ್ ಆಗಿ ಬೆಳೆಸಿದ್ರಂತೆ. ಮನೆಯಿಂದ ಆಚೆ ಹೋಗುವುದು ನಿಶಿದ್ಧವಾಗಿತ್ತಂತೆ! "ಹುಡುಗೀರ್ನ ಹೇಗೆ ಬೆಳೆಸ್ತಾರೋ ಹಾಗೆ ಬೆಳೆಸಿದ್ದರು ನಮ್ಮ ಅಪ್ಪ-ಅಮ್ಮ" ಅಂತ ಹೇಳ್ತಿರ್ತಾನೆ. ಅದಾದ ನಂತರ ಈಗ ಫ್ರೀ ಬಿಟ್ಟಿದ್ದಾರಂತೆ. ಶ್ರೇಯಸ್ ತನ್ನ ಹಕ್ಕು ಪಾಲಿನ 'ಫಿಸಿಕಲ್ ವೈಲೆನ್ಸ್'ನ ಮುಗಿಸಿ, ಹೇಗೆ ಅಶೋಕ ಚಕ್ರವರ್ತಿ ಕಳಿಂಗ ಯುದ್ಧದ ನಂತರ ಶಾಂತಿಪಥ ಹಿಡಿದನೋ ಅದೇ ರೀತಿ ಶ್ರೇಯಸ್ ಕೂಡ ಈಗ ಶಾಂತಿ ಮಾರ್ಗವನ್ನು ಅನುಸರಿಸುತ್ತಿದ್ದಾನೆ. ಎಷ್ಟೇ ಶಾಂತಿಪಥ ಹಿಡಿದರೂ ಸಹ ಸಂಪಾದಕ ಮಂಡಳಿಯಲ್ಲಿ ಸಂಚಿತ ಮತ್ತು ಪೃಥ್ವಿಯ ಕಾಲೆಳೆಯುವುದನ್ನು ಬಿಟ್ಟಿಲ್ಲ.
ಗೆಳೆಯನ ತೋಟದ ಮನೆ ಅಂದ್ರೆ ಇವನಿಗೆ ತುಂಬಾ ಇಷ್ಟ. ಅಷ್ಟೇ ಅಲ್ಲ, ಅಲ್ಲಿಯ ತಿಂಡಿ 'ತೀರ್ಥ'ದ ಬಗ್ಗೆಯೂ ಅಪಾರ ಒಲವು! ಗೆಳೆಯನ ಹೃದಯ ಮುರಿದ ಸಂದರ್ಭದಲ್ಲಿ ಹೆಗಲುಕೊಟ್ಟು ಸಮಾಧಾನ ಮಾಡಿದ ನಮ್ಮ ಶ್ರೇಯಸ್ ತನ್ನನ್ನು ತಾನು ಸಮರ್ಥಿಸುವುದರಲ್ಲಿ ಎತ್ತಿದ ಕೈ. ಸಂಪಾದಕ ಮಂಡಳಿಯ ಕೆಲಸವನ್ನು ಅಚ್ಚುಕಟ್ಟಾಗಿ, ಜವಾಬ್ದಾರಿಯುತವಾಗಿ ನಿಭಾಯಿಸುವ ಈತ ಕೊಟ್ಟ ಕೆಲಸವನ್ನು ನಾಜೂಕಾಗಿ ಮುಗಿಸಿ ಬೇರೆಯವರ ಸಹಾಯಕ್ಕೆ ದೌಡಾಯಿಸುತ್ತಾನೆ. ಕೆಲವು ಮುಖ್ಯ ಸಲಹೆ ಸೂಚನೆ ನೀಡುತ್ತಾ, ಮಿಕ್ಕಿರುವ ಕೆಲಸಗಳನ್ನು ನೆನಪಿಸುತ್ತ ಎಲ್ಲರನ್ನು ನಗಿಸುತ್ತ ಇರುವ ಶ್ರೇಯಸನ ಶ್ರೇಯಸ್ಸು ಎಂದಿಗೂ ಕುಂದದಿರಲಿ ಇವನು ಸದಾ ಹಸನ್ಮುಖಿಯಾಗಿರಲಿ ಎಂದು ಆಶಿಸುವವ.