Pruthvi K P

Pruthvi K P

"Born to be ossum"

VII Sem, CSE

'ಪೃಥ್ವಿ' ಎಂದರೆ ನಿಮ್ಮ ಹತ್ತಿರ ಸುಳಿದಾಡುವ ಪದಗಳಾವುವು?
ಉತ್ತರ : ಶಾಂತ ಸ್ವರೂಪ, ಗಂಭೀರ ಮೂರ್ತಿ, ಸೌಮ್ಯ eಣಛಿ...

ನೀವು ಉತ್ತರವನ್ನು ನೀಡುವ ವೇಳೆಗೆ 'ಪೃಥ್ವಿ' ಎಂದರೆ ಭೂದೇವಿ ಎಂದುಕೊಂಡು ಉತ್ತರಿಸಿದ್ದಲ್ಲಿ ನಿಮ್ಮ ಉತ್ತರ ಸರಿಯಾಗಿರಬಹುದು. ಆದರೆ ಇಲ್ಲಿ ಪಕ್ಕದಲ್ಲಿ ಕಾಣುವ ನಮ್ಮ ಪುಟ್ಟಿ ಅಲಿಯಾಸ್ ಪೃಥ್ವಿಯ ಸೌಮ್ಯ ಮುಖವನ್ನು ಕಂಡು ಈ ಪದಗಳಲ್ಲಿ ಬಣ್ಣಿಸಿದ್ದರೆ ಅಕಟಕಟಾ! ಪೆಪ್ಸಿಯಲ್ಲಿ ಜಾಮೂನು ಬಿದ್ದಂತೆ, ಹುಣಸೆ ಹಣ್ಣಿಗೆ ಬೆಲ್ಲದ ಪಾಕ ಲೇಪಿಸಿದಂತೆ. ನಿಲ್ಲಿರಿ! ಭಾವಚಿತ್ರದಲ್ಲಿ ಅಷ್ಟು ಮುದ್ದಾಗಿರುವ ಈ ಕಂದಮ್ಮನನ್ನು ಈ ಪರ್ರಿಯಾಗಿ ಪರಿಚಯಿಸುತ್ತಿರುವುದಾದರೂ ಯಾಕೆ? ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡಿದ್ದರೆ, ನೀವು ಇನ್ನೂ ನಮ್ಮ ಸಂಪಾದಕ ಮಂಡಳಿಯ ಮಾತಿನಮಲ್ಲಿ, ನಟನಾ ನಂದಿನಿ, ಚಾಣಾಕ್ಷ ರತ್ನಾಕರಿಯನ್ನು ಇನ್ನೂ ಭೇಟಿಯಾಗಿಲ್ಲವೆಂಬುದೊಂದೇ ಕಾರಣ.
ಪೃಥ್ವಿ ಎಂದಾಕ್ಷಣ ತಿಗಣೆ ಕಚ್ಚಿದ ಮಂಗನ ಮೂರ್ತಿಯ ಸಪ್ಪೆ ಮೋರೆಯಲ್ಲೂ, ಕನಿಷ್ಠಪಕ್ಷ ಮೂರು ಮಿಲಿ ಸೆಕೆಂಡ್ ಗಳ ನಗು ಮೂಡುತ್ತದೆ. ಪೃಥ್ವಿಯು ಎಲ್ಲ ಬಾಲಕಿಯರಂತೆ ಮೊದಲ ಕೆಲ ಘಳಿಗೆ ಕಂಡೊಡನೆ ಸರಿ ಒಂದೆರಡು ವಿಶೇಷ ಠಿಡಿಚಿಟಿಞಗಳನ್ನು ಇವಳ ಮುಂದೆ ಪ್ರಸ್ತುತಪಡಿಸೋಣವೆಂದು ನೀವು ಮುಂದಾದ ಮರು ಘಳಿಗೆಗೆ ಇವಳ ಅಸಮಾನ್ಯ ಸಾಮರ್ಥ್ಯವು ಪುತ್ಕಾರಗೊಳ್ಳಲು, ನಿಮ್ಮೆಲ್ಲ ತಮಾಷೆಗಳು ಹಳಸಿ, ಬುಳಸು ಹಿಡಿದ ಕುಂಬಳಕಾಯಿಯಂತೆ ಮೂಲೆಗುಂಪಾಗುತ್ತವೆ. ಅನಂತನೂ ಇವಳ ಅಸಮಾನ್ಯ ಸಾಮರ್ಥ್ಯಕ್ಕೆ ಬೆರುಗಾಗಿ, ಅಂದೊಮ್ಮೆ ಮಣ್ಣು ಮುಕ್ಕಿದ ನಂತರ ಇವಳೇ ಸರಿಯಾದ ವಾರಸುದಾರಳೆಂದು ದತ್ತು ಸ್ವೀಕರಿಸಿದ್ದು ಈಗ ಇತಿಹಾಸ.
ಪೃಥ್ವಿಯು ಛಲ ಬಿಡದ ತ್ರಿವಿಕ್ರಮನಂತೆ. ಒಂದು ಕೆಲಸಕ್ಕೆ ಕೈ ಹಾಕಿದರೆ ಸಾಕು ಅದು ಪೂರ್ಣ ಮುಗಿಯದ ಹೊರತು ಹಿಂದೇಟಾಕುವ ಮಾತೇ ಇಲ್ಲ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ಇವಳಿಗೆ ಮೊದಮೊದಲು ದ್ವಿಚಕ್ರವಾಹನವನ್ನು ಚಲಾಯಿಸಲು ಕೊಂಚ ಕಷ್ಟವೆನಿಸುತ್ತಿತ್ತು. ಆದರೆ ಕಾಲೇಜಿನ ಕಠಿಣ ವೇಳಾಪಟ್ಟಿಯ ನಡುವೆಯೂ, ಕಾಲೇಜಿನಲ್ಲಿನ ರಸ್ತೆಗಳಲ್ಲಿ ಬಿಡುವಿನ ವೇಳೆ ಸಿಕ್ಕೊಡನೆಯೇ ಪರಿಶ್ರಮದಿಂದ ಅಭ್ಯಾಸ ಗೈದು ಕರತಲಾಮಲಕ ಮಾಡಿಕೊಂಡದ್ದು ಮುಂಬರುವ ಪೀಳಿಗೆಗೆ ಆದರ್ಶದಾಯಕವಾಗಿದೆ. ಶ್ರಮದ ಫಲವೆಂಬಂತೆ ಹೊಸದಾಗಿ ಒಂದು ಕಂದು ಬಣ್ಣದ ಸುಂದರ ದ್ವಿಚಕ್ರ ದ್ವಿಚಕ್ರವಾಹನದ ಖರೀದಿಯಾಗಿದೆ. ಪೃಥ್ವಿಗೆ ಸಂಗೀತವೆAದರೆ ಬಹಳ ಇಷ್ಟ. ನಾನು ಕೂಡ ಸಂಗೀತ ಪ್ರಿಯನೇ. ಸುಮಾರಾಗಿ ಅಲ್ಪಸ್ವಲ್ಪ ಹಾಡುತ್ತೇನೆ ಸಹ. ನಾನು ಹಳೆಯ ಹಾಡಿಗಳನ್ನು ಗುನುಗಿಸುತ್ತಿರುವ ವೇಳೆಯಲ್ಲಿ ಪೃಥ್ವಿಯು ತಕ್ಷಣ ಅದು ಯಾವ ಹಾಡೆಂಬುದನ್ನು ಗುರುತು ಹಿಡಿದು ಧ್ವನಿಗೂಡಿಸುತ್ತಾಳೆ. ಲತಾ ಮಂಗೇಶ್ಕರ್ ಅವರು ಹಾಡಿರುವ "आप् कि नजरोने समझं" ಹಾಡು ಇವಳಿಗೆ ಅತ್ಯಂತ ಪ್ರಿಯಕರವಾದದ್ದು. ಪೃಥ್ವಿಯು ಉತ್ತಮ ಹಾಗೂ ಸದೃಢ ಆರೋಗ್ಯದ ಮಹತ್ವವನ್ನು ಅರಿತವಳಾಗಿದ್ದು, ಕುಕ್ಕರಹಳ್ಳಿ ಕೆರೆಗೆ ಆಗಾಗ ವಾಯು ವಿಹಾರಕ್ಕೆಂದು ಹೋಗುತ್ತಾಳೆ. ಪೃಥ್ವಿಯು ಸಹಜವಾಗಿ ಯಾರೊಡನೆಯೂ ಮನಸ್ತಾಪಗಳನ್ನು ಇಟ್ಟುಕೊಳ್ಳದ ಹುಡುಗಿಯಾಗಿದ್ದರು, ಇವಳ ನೆಚ್ಚಿನ ಕುಕ್ಕರಹಳ್ಳಿ ಕೆರೆಯನ್ನು ಮೀರಿಸುವ ಸೌಂದರ್ಯ ಲಿಂಗಾಂಬುದಿ ಕೆರೆಯು ಹೊಂದಿದೆ ಎಂಬ ಅವಳ ಮಿತ್ರ ಮಂಡಳಿಯ ವಾದವು ಮಾತ್ರ ಅವಳ ಸಹನೆಗೂ ಮೀರಿದ್ದಾಗಿದೆ.
ವಹಿಸಿದ ಕೆಲಸಗಳನ್ನು ಶಿಸ್ತಿನಿಂದ ಪೂರ್ಣಗೊಳಿಸಿ, ತಿಳಿಯದ ವಿಷಯಗಳು ಕೇಳಿ ತಿಳಿದುಕೊಳ್ಳುವ ಉತ್ತಮ ಅಭ್ಯಾಸ ಇವಳದ್ದಾಗಿದೆ. ತರಗತಿಯ ವಿಷಯಗಳಲ್ಲಿ ಸದಾ ಅತ್ಯುತ್ತಮ ಅಂಕಗಳನ್ನು ಪಡೆಯುವ ಇವಳಿಗೆ ಅಂಕಗಳೆಂದರೆ ಸ್ವಲ್ಪ ಜಾಸ್ತಿ ಒಲವು. ಹಾಗಂತ ಕೇವಲ ಅಂಕಗಳಿಗೆ ಸೀಮಿತವಾಗದೆ, ಪಠ್ಯದ ಆಚೆಗಿನ ವಿಷಯಗಳನ್ನೂ ಕಲಿಯುವ ತುಡಿತವನ್ನು ಹೊಂದಿದ್ದಾಳೆ. ಪೃಥ್ವಿಯು ಅದೆಷ್ಟೇ ಮೋಜು ಮಸ್ತಿಯಿಂದ ಮಾತುಕಥೆಗಳನ್ನಾಡಿದರು, ಎಂದಿಗೂ ಹಿರಿಯರ ಬಗೆಗೆಗಾಗಲಿ, ಅನ್ಯರ ಬಗೆಗಾಗಲಿ ಅಗೌರವವನ್ನು ಸೂಚಿಸುವ ಪದಗಳನ್ನಾಡಿಲ್ಲ. ಪೃಥ್ವಿಯ ಎಲ್ಲಾ ಆಸೆ- ಆಕಾಂಕ್ಷೆಗಳು ಈಡೇರಲಿ. ಇವಳ ಮುಖದಲ್ಲಿ ನಗು ಹೀಗೆ ಸದಾ ನೆಲೆಸಿರಲಿ ಎಂದು ಆಶಿಸುತ್ತೇನೆ.


Character Stats
Geekiness
Introversion
Peching
Paapaness
Speciality
Talks one's ear off

The Rest of the Crew

  • Shreyas S
  • Pruthvi K P
  • Sharmilee Sosale
  • Sudhanva Kulkarni
  • Tarun T
  • Gurudarshan M J
  • Ninaad A Kaller
  • Shivani M
  • Unnathi Prabhu
  • Anurag G
  • Vaishnavi Bharadwaj
  • Poornima Hegde
  • Ananya P
  • Bhoomika S G
  • Anjana Hegde
  • Anushree Bhat
  • Savitri
  • Diya Sharvani
  • Yashaswi V
  • Sai Supritha K P
  • Pranava Kulur
  • Shrijani G
  • Pranav Karthik
  • Charvi