
Sudhanva Kulkarni
RAT-A-TAT
VII Sem, ECE
ಎರಡನೇ ವರ್ಷದ ಇಅ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ಈತ ಪಕ್ಕ ಉತ್ತರ ಕರ್ನಾಟಕದವ, ಅಥಣಿ ಹೈದ. 'ಮಾತು ಕಮ್ಮಿ ಕೆಲಸ ಜಾಸ್ತಿ' ಎಂಬುದಕ್ಕೆ ಸೂಕ್ತ ಉದಾಹರಣೆ. ಹಾಗಂತ ಮಾತಾಡುವುದರಲ್ಲಿ ಏನು ಕಮ್ಮಿ ಇಲ್ಲ; ಹಾಸ್ಯ ಮಾಡುವುದರಲ್ಲಿ ಎತ್ತಿದ ಕೈ. ಅಲ್ಲೊಂದು-ಇಲ್ಲೊAದು ಪಂಚ್ ಡೈಲಾಗ್ಸ್ ಹೊಡಿತಾ ಇರುತ್ತಾನೆ. ಆ ಉತ್ತರ ಕನ್ನಡ ಭಾಷಾ ಶೈಲಿಯಲ್ಲಿ ಈತನ ಮಾತುಗಳು ಬಹಳ ಸೊಗಸಾಗಿರುತ್ತದೆ. ತನ್ನ ವಿಚಾರಗಳನ್ನು ವ್ಯಕ್ತಪಡಿಸುವಷ್ಟೆ ಬೇರೆಯವರ ಅಭಿಪ್ರಾಯಗಳನ್ನು ಆಲಿಸುತ್ತಾನೆ. ಈತ ಅಪ್ಪಟ ದೇವ ಭಕ್ತ, ಪ್ರತೀ ಗುರುವಾರ ಮಠಕ್ಕೆ ಹೋಗುತ್ತಾನೆ ಮತ್ತು ಉಪವಾಸ ಮಾಡುತ್ತಾನೆ. ಅನೇಕ ಶ್ಲೋಕಗಳು ಕಂಠಪಾಠವಾಗಿವೆ. ಆ ಶ್ಲೋಕಗಳನ್ನು ಅರೆ ನಿದ್ರೆಯಲ್ಲೂ ಲೀಲಾಜಾಲವಾಗಿ ಹೇಳಬಲ್ಲ.
ಕ್ರೀಡೆಗಳಲೂ ಈತನಿಗೆ ಬಹಳ ಆಸಕ್ತಿ. ವಾಲಿಬಾಲ್ ಆಡುತ್ತಾನೆ ಮೀಟ್ ಮುಗಿದ ಕೂಡಲೇ ಮ್ಯಾಚ್ ಇದೆ ಅಂತ ಓಡುತ್ತಾನೆ. ಈತ ಕ್ರಿಕೆಟ್ ಪ್ರೇಮಿ ಕೂಡ ಹೌದು; ವಿರಾಟ್ ಕೊಹ್ಲಿ ಕಟ್ಟಾ ಅಭಿಮಾನಿ. ಎಲ್ಲಾ ಮ್ಯಾಚ್‌ಗಳನ್ನು ಲೈವ್ ನೋಡಬಯಸುತ್ತಾನೆ. ಈತನ ಸಂಗೀತದ ಅಭಿರುಚಿ ಬಗ್ಗೆ ಹೆಚ್ಚು ಜನರಿಗೆ ತಿಳಿದಿಲ್ಲ ಶ್ಲೋಕಗಳಷ್ಟೇ ಅಲ್ಲದೆ ಅನೇಕ ಚಿತ್ರಗೀತೆಗಳು,
ಭಾವಗೀತೆಗಳು ಕಂಠಪಾಠವಾಗಿವೆ. ಕರ್ಣಕ್ಕೆ ಅಹಲ್ಲಾದಕರವಾದ ಚಿತ್ರಗೀತೆಗಳು ಈತನ ಪ್ಲೇ ಲಿಸ್ಟ್ನಲ್ಲಿ ಉಂಟು. ಈತನ ಹಾಸ್ಟೆಲ್ ರೂಮ್ನಲ್ಲಿ ೨೪/೭ ಚಿತ್ರಗೀತೆಗಳು ಚಾಲ್ತಿಯಲ್ಲಿರುತ್ತದೆ. ಭಾರತೀಯ ಸೇನೆ ಎಂದರೆ ವಿಶಿಷ್ಟ ಗೌರವ ಅಭಿಮಾನ ಈತನ ಅಂತರಾಳದಲುAಟು.
ಬೋರ್ಡ್ ಕೆಲಸವಿದ್ದರೆ ಮಾತ್ರ ಕಣ್ಣಿಗೆ ಕಾಣುವ ಈತ, ಇಲ್ಲವಾದರೆ ತನ್ನ ಗುಹೆಯನ್ನು ಬಿಟ್ಟು ಹೊರಬರುವುದಿಲ್ಲ. ಹೆಚ್ಚು ಹೊಡಾಟವಿಲ್ಲ, ಹೊರಗಿನ ಊಟ ಮಾಡಲ್ಲ ತಾನಾಯ್ತು ತನ್ನ ಪಾಡಾಯ್ತು ಎಂದಿರುತಾನೆ. ಮೀಟ್ ನಂತರದ ಐಚಿಖಚಿ ಕೂಟಕ್ಕೆ ಹೆಚ್ಚಾಗಿ ಬರುವುದಿಲ್ಲವೆಂಬುದು ತನ್ನ ಸಹ ಸಂಪಾದಕರ ಮನಸ್ಸಿಗೆ ನೋವುಂಟು ಮಾಡಿದೆ. ಆದರೆ ಇತ್ತೀಚಿಗೆ ನಮ್ಮೊಂದಿಗೆ ಲಾರಾ ಕೂಟಕ್ಕೆ ಬಂದಿದ್ದು ಎಲ್ಲರಿಗೂ ಆನಂದ ತಂದಿದೆ; ಹೆಚ್ಚಾಗಿ ನಮ್ಮ ಹಿರಿಯ ಸಂಪಾದಕರಾದ ಸಂಚಿತಾರವರಿಗೇ ಹೆಚ್ಚು ಸಂತೋಷವಾಗಿದೆ ಸೂತ್ರಗಳ ಅನುಸಾರ ಒಂದೆರಡು ಆನಂದ ಭಾಷ್ಪಗಳು ಸುರಿದಿದೆ ಎಂದು ತಿಳಿದುಬಂದಿದೆ.
ಹೀಗೆ ಹೆಚ್ಚಾಗಿ ನಮ್ಮೊಂದಿಗೆ ತಿರುಗಾಡಬೇಕೆಂದು ಹೇಳುತ್ತಾ, ಈತ ಜೀವನದಲ್ಲಿ ಬಯಸಿದ್ದಕ್ಕಿಂತ ಹೆಚ್ಚಿನ ಯಶಸ್ಸುಸಿಗಲೆಂದು ಹಾರೈಸುತ್ತೇನೆ.