Vinay Vasishta

Vinay Vasishta

Vinay ಮತ್ತೊಮ್ಮೆ- ಮಗದೊಮ್ಮೆ Vasishta

Graduated, EIE

ಹೆಲ್ಲೋ... ಮೈಸೂರು. ಬೆಳಿಗ್ಗೆ ಮಿಕ್ಕಿದ್ ಉಪ್ಪಿಟ್ಟು ತಿಂದು, ಮಧ್ಯಾಹ್ನದ ಹೊತ್ತಿಗೆ ನೂಡಲ್ಸ್ ಮತ್ತೆ ಗೋಭಿ ಮಂಚೂರಿಯನ್ ತಿಂದ್ರೂನು ಹೊಟ್ಟೆ ತುಂಬ್ದೇ, ಇಲ್ಲೆ ಪಕ್ಕದಲ್ಲಿರೋ ಕಣ್ಣನ್ ಅಲ್ಲಿ ಮಸ್ತ್ ಮ್ಯಾಂಗೋ ಮಿಲ್ಕ್ಶೇಕ್ ಕುಡ್ದು, ಲೇಟಾಯ್ತು ಅಂತ ನಿಧಾನಕ್ಕೆ ಓಡ್ಕೋಂಡು ಬರ‍್ತಾ ಇರ‍್ವಾಗ, ಹಂಗೆ ಒಂದು ಪ್ಯಾಕೆಟ್ ಸೋಯಾ ಸ್ಟಿಕ್ಸ್ ಹಿಡ್ಕೊಂಡು, ಬುಲ್ಲೆಠ್ ಟ್ರೇನ್ ಸ್ಪೀಡ್‌ಗೆ ನನ್ Activa ಓಡ್ಸಿ, ಸರಿಯಾಗಿ 6 ಗಂಟೆಗೆ ನಿಮ್ ಜೊತೆ ಹರಟೆ ಹೊಡಿಯೋಕೆ ಬಂದಿರೋ ನಿಮ್ಮ ಮನೆ ಹುಡ್ಗಾ, The Real Family Man ವಿನಯ್ ಬಿ. ಸಿ. ವಸಿಷ್ಠ ಕಡೆ ಇಂದ ಎಲ್ಲರಿಗೂ 69.96FMನ “ಹೂ ಗುರು!” ಕಾರ್ಯಕ್ರಮಕ್ಕೆ ಪ್ರೀತಿಯ ಸ್ವಾಗತ. ಬ್ಯುಸಿ ಬ್ಯುಸಿ ಅಂತ ಒಬ್ಬರ ಮುಖ ನೋಡೋಕೆ ಇನ್ನೊಬ್ಬರಿಗೆ ಟೈಮ್ ಇಲ್ಲದಿರೋ ಈ ಕಾಲದಲ್ಲೂ ಪ್ರತಿ ದಿನ ಬೆಳಗ್ಗೆ ಏಳಕ್ಕೂ ಪ್ರೀತಿಯಿಂದ ಶುಭೋದಯ, ಗುಡ್ ಮಾರ‍್ನಿಂಗ್ ಮೆಸೇಜ್ ಕಳ್ಸೊ ನನ್ನೆಲ್ಲಾ ಪ್ರೀತಿಪಾತ್ರರಿಗೂ ಇವತ್ತಿನ “ಹೂ ಗುರು!” ಕಾರ್ಯಕ್ರಮವನ್ನ ಡೆಡಿಕೇಟ್ ಮಾಡ್ತಾ ಇದೀನಿ. ಇದನ್ನ ಕೇಳಿ ಮಲಗೋ ಮುನ್ನ ಶುಭರಾತ್ರಿ ಹೇಳೋರು ಬೇಜಾರಾಗ್ಬೇಡಿ, ನಿಮಗೋಸ್ಕರ ಸ್ಪೆಶಲ್ ಆಗಿ ಬರ‍್ತಾ ಇದೆ ನಾನು ಕ್ಯಾರಿಯೋಕೆಯಲ್ಲಿ ಹಾಡಿದ ಹಾಡು. ಕೇಳಿ, ನೀವುನೂ ಜೊತೆಗೆ ಹಾಡಿ.

“ಯಾರಿಟ್ಟರೀ ಚುಕ್ಕಿ... ಯಾಕಿಟ್ಟರೀ ಚುಕ್ಕಿ... “

ಸರಿಯಾಗಿ ಒಂದು ಕಡೆ ನಿಂತು ಮಾತಾಡೋಕೆ ಬರದೇ ಇದ್ರೂನು ಬಂಜೀ ಜಂಪಿಂಗ್ ಮಾಡೋಷ್ಟು ಧೈರ್ಯ ಬಂದಿದೆ ಈ ಕಾಲದ ಮಕ್ಕಳಿಗೆ ಅಂದ್ರೆ ಎಲ್ಲೋ ಏನೋ ಮಿಸ್ ಹೊಡಿತಿದೆ ಅನ್ಸ್ತಿದೆ ನಂಗೆ. ಈ ವಿಷಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ಅಂಥ ತಿಳಿಸಿ. ನಮ್ಮ ಸಂಖ್ಯೆ 6060520009. ನಿಮಗಾಗಿ ಈಗ ಬರ‍್ತಾ ಇದೆ,

“ಮೇಘ ಬಂತು ಮೇಘ, ಮೇಘ ಬಂತು ಮೇಘ, ಮೇಘ ನೀಲಿಯ ಮೇಘ”

ಮೊದಲನೇ ಉತ್ತರನ ಕಳ್ಸಿದ್ದಾರೆ ನಂಜನಗೂಡಿನಿಂದ ಸೋಮಶೇಖರ್ ಅವರು, ಬನ್ನಿ ನೋಡಣ. “ಎಗ್ಸಾಮ್ ಅಲ್ಲಿ ಕೇಳಿರೋ ಪ್ರಶ್ನೆಗೆ ಉತ್ತರ ಗೊತ್ತಿಲ್ಲ ಅಂದ್ರುನೂ, ರೂಲ್ಡ್ ಶೀಟ್ ಅಲ್ಲಿ ಉತ್ತರ ಬರಿಬೆಕೋ, ಅನ್‌ರೂಲ್ಡ್ ಶೀಟ್ ಅಲ್ಲಿ ಬರಿಬೇಕೋ ಅಂಥಾ ಗೊತ್ತಾಗ್ದೆ, ಬೇರೆಯವರಿಗೆ ಕಾಲ್ ಮಾಡಿ ತಲೆ ತಿನ್ನೋ ಜನರಿರೋ ಕಾಲದಲ್ಲಿ, ಬಂಜೀ ಜಂಪಿಂಗ್ ಎಲ್ಲಾ ತುಂಬಾ ಹೈಟೆಕ್ ಆಯ್ತು ಗುರು”. ವಾವ್ ಸೋಮಶೇಖರ್ ಅವರೇ, ನೀವೂ ಹಿಂಗೆ ಮಾಡ್ತಿದ್ರಿ ಅನ್ಸುತ್ತೆ! ಯಾವ್ ಶೀಟ್ ಅಲ್ಲಿ ಬರಿಬೇಕು ಅನ್ನೋ ಡೌಟ್ ಬಗ್ಗೆ ನನಗೆ ಗೊತ್ತಿಲ್ಲ ಆದ್ರೆ ನಾವು ಒಂದು ಮೇಸೇಜ್ ಹಾಕಕ್ಕೂ ಊರಲ್ಲಿರೋ ನಮ್ ಫ್ಯಾನ್ಸ್ ಎಲ್ಲಾದುಕ್ಕೂ ನನಗೆ ಆನ್ಸರ್ ಕೊಡ್ಸಿಬಿಡೋರಪ್ಪ.
ಬನ್ನಿ ಈಗ ಒಬ್ರು ಕಾಲರ್ ರೆಡಿ ಇದಾರೆ ಮಾತಾಡ್ಸೋಣ. ಹಾಯ್... ಗುಡ್ ಈವ್ನಿಂಗ್... ಯಾರು ಮಾತಾಡ್ತಾ ಇರೋದು. “ಹೆಲ್ಲೋ ವಿನು. ಹೇಗಿದಿಯಾ? ನಾನು ಭುವನಾ. ನಾನು ನೆನಪಿಲ್ವಾ?”. ವಿನು ನಾ? ಭುವನಾ ನಾ? ಯರ‍್ರೀ ನೀವು? “ನಾನು, ಎರಡನೇ ವರ್ಷದ ಇಂಜಿನಿಯರಿಂಗ್, ‘ಒಲವಿನ ಓಲೆ’, ಕನ್ಫೆಷನ್ನು...ಅ... ಎ...” ಹೆಲೋ? ಹೆಲೋ? ಇಂಜಿನಿಯರಿಂಗ್ ಮುಗಿಯೋವರೆಗು ಹುಡ್ಕದ್ನಲ್ರೀ. ಎಲ್ರಿ ಹೋದ್ರಿ...

“ಕುಹು ಕುಹೂ ಕೋಗಿಲೆ ಕೂಗಿದೆ ಯಾಕಂತೀಯಾ? ನಿನ್ನ ಕೇಳಿದೆ ಏನಂತೀಯಾ?”

ಆ... ಬನ್ನಿ ಮುಂದಿನ ಕರೆ ಯಾರದು ನೋಡೋಣ. ಹಲ್ಲೋ... ಯಾರು ಮಾತಡ್ತಾ ಇರೋದು? “ನಮಸ್ಕಾರ ಸರ್. ನಾನ್ ಶೇಷಾದ್ರಿ ಅಂಥ. ಇಲ್ಲೇ ಮೈಸೂರಲ್ಲಿ ಇರೋದು. ರಿಟೈರ್ಡ್ ಬ್ಯಾಂಕ್ ಎಮ್ಪ್ಲಾಯಿ. ಏನು ಕೆಲಸ ಇಲ್ದೆ ನಾನು ಖಾಲಿ ಕೂತಿರ‍್ವಾಗ ನಿಮ್ ಶೋ ನೋಡ್ತೀನಿ. ನಿಮ್ ದೊಡ್ಡು ಫ್ಯಾನ್ ಸರ್”. ಥ್ಯಾಂಕ್ಯೂ ಸರ್. ಹೇಳಿ ನಿಮ್ಮ ಅನಿಸಿಕೆ ಏನು ಬಂಜಿ ಜಂಪಿಂಗ್ ಬಗ್ಗೆ. “ಬಂಜಿ ಜಂಪಿಂಗ್ ಎಲ್ಲ ಸಣ್ಣ ಮಕ್ಕಳಿಗೆ ಸರ್. ನಾನೇನಿದ್ರು ಜಗಲಿಯಿಂದ ಜಗತ್ತಿಗೆ ಹಾರೋದು”. ಏನು ಕ್ವಾಣೆ! “ಇಲ್ಲ ಸರ್, ಮೊನ್ನೆ ಇನ್ನು ಇದುಕ್ಕೆಲ್ಲ ಸಾಕ್ಷಿ ಅನ್ನೋ ಹಾಗೆ ಒಂದು ಕನಸು ಬಿದ್ದಿತ್ತು. ರಾತ್ರಿ 10:30ಕ್ಕೆ ನಾಸಾ ಕಡೆಯಿಂದ ನಾನು ಸ್ಪೇಸ್‌ಗೆ ಹೋಗೋಕೆ ರೆಡಿ ಆಗ್ತಿದ್ದೆ. ನನ್ನ ಮಗಳು ಭುವನ ನನ್ನ ಬಟ್ಟೆ ಎಲ್ಲಾ ಪ್ಯಾಕ್ ಮಾಡ್ಕೊಡ್ತಿದ್ಲು. ಅಷ್ಟ್ರಲ್ಲಿ ಎಚ್ಚರ ಆಗೋಯ್ತು ನೋಡಿ ಸರ್”.
ವಾಟ್ ಮತ್ತೆ ಭುವನಾ ನಾ?...

ಸಂಜೆ ನನ್ ಜೊತೆ ಹರಟೆ ಹೊಡಿಯೋಕೆ ಬಂದ್ರೂನು, ಬೆಳಿಗ್ಗೆ ಏನ್ ತಿಂಡಿ ತಿಂದ್ರಿ ಅಂತಾ ಮರಿಬೇಡಿ ಅಂತಾ ಹೇಳ್ತಾ, ನನ್ನ ಜಿಮ್ ಟೈಮ್ ಆಯ್ತು. ಇವತ್ತು ಕರೆ ಮಾಡಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು. ಮತ್ತೆ ನಾಳೆ ಸಿಗೋಣ ಇದೇ ಸಮಯಕ್ಕೆ. ಈಗ ನಿಮಗಾಗಿ ಬರ‍್ತಾ ಇದೆ ನನ್ನ ನೆಚ್ಚಿನ ಹಾಡು. ಕೇಳಿ, ಎಂಜಾಯ್ ಮಾಡಿ...

“ಅಂಟಂಟಂ ಅಂಟಂಟಂ ಅಂಟಂಟಂಟಂಟಂಟಂಟಂ...”


Character Stats
Geekiness
Introversion
Peching
Paapaness
Speciality
Voice modulation

The Rest of the Crew

  • Sharvari S. Sosale
  • Aditya Rajaram Hegde
  • Santosh Satish
  • Bhavana Tiyyagura
  • Royina K. J.
  • Sumi Lal
  • Vinay Vasishta
  • Prarthana G. P.
  • Shashank Venkatesan
  • Shreya Kanchitota
  • Anagha P.
  • Vijeth Vaishnav D.
  • Rajath R. Rao
  • Surabhi Seenivasan
  • Sanchita V. Kumar
  • Harsha Bhat
  • Poorvi Shetty
  • Ananya K.
  • Apoorva K. C.
  • Kshamata Kaujalgi
  • Meghana Kashyap
  • Anagha Honnali
  • Bhuvan Koduru
  • Abhilash Hathwar
  • Vadiraj B Hayagreeva